Old Age Home : +91 9845635966 | I.T.I : 08232-653967 | Swadhar : 08232-225100 | Senior Citizen Care Center : 08232-225500
Like us!
Follow us!
Follow us!
Follow us!

Jnana Sindhu Day Care Center

ಹಿರಿಯ ನಾಗರೀಕರ ಹಗಲು ಯೋಗಕ್ಷೇಮ ಕೇಂದ್ರ

5ನೇ ಕ್ರಾಸ್, ನೆಹರು ನಗರ, ಮಂಡ್ಯ

ಜ್ಞಾನಸಿಂಧು ಎಜುಕೇಷನಲ್ ಅಂಡ್ ಕಲ್ಚರಲ್ ಸೊಸೈಟಿ (ನೊಂ) ಇದರ ಅಂಗ ಸಂಸ್ಥೆಯಾಗಿ 2017-18 ನೇ ಸಾಲಿನಲ್ಲಿ ನಗರದ ನೆಹರುನಗರದಲ್ಲಿ ರಾಜ್ಯ ಸರ್ಕಾರದ ಅನುದಾನದೊಂದಿಗೆ ಸಾರ್ವಜನಿಕರ ಉಪಸ್ಥಿತಿಯಲ್ಲಿ ಸ್ಥಾಪನೆ ಮಾಡಲಾಯಿತು. ಸಾರ್ವಜನಿಕಾರ ಹಾಗೂ ಹಿರಿಯ ನಾಗರೀಕರ ಗಮನಕ್ಕೆ ತರುವಲ್ಲಿ ಅದ್ಧೂರಿ ಪ್ರಚಾರದೊಂದಿಗೆ ಕೇಂದ್ರದಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿಗಳನ್ನು ನೀಡಿ ದಿನಾಂಕ 29.04.2017 ನೇ ಸಾಲಿನಲ್ಲಿ ಕೇಂದ್ರದ ಪ್ರಾರಂಭೋತ್ಸವ ಮಾಡಲಾಯಿತು.

ಪ್ರಾರಂಭದಲ್ಲಿ ಉತ್ತಮ ಪ್ರತಿಕ್ರಿಯೆಗಳೊಂದಿಗೆ ಹಿರಿಯ ನಾಗರೀಕರು ಕೇಂದ್ರದಲ್ಲಿ ದೊರೆಯುವ ಸವಲತ್ತುಗಳ ಬಗ್ಗೆ ಖುದ್ದಾಗಿ ಬಂದು, ಮಾಹಿತಿ ತಿಳಿಯದ ಸ್ನೇಹಿತರನ್ನು ಜೊತೆಗೂಡಿಕೊಂಡು ಪ್ರವೇಶ ಪಡೆದುಕೊಳ್ಳತೊಡಗಿದರು.

ಹಿರಿಯ​ ಜೀವಗಳ ಮನರಂಜನೆಗಾಗಿ ದೂರದರ್ಶನ, ರಾಜ್ಯ ಮತ್ತು ರಾಷ್ಟ್ರದ ಬಗ್ಗೆ ಸುದ್ದಿ ತಿಳಿದುಕೊಳ್ಳಲು, ಸುದ್ದಿ ಪತ್ರಿಕೆಗಳು, ವಾರ ಮತ್ತು ಮಾಸಿಕ ಪತ್ರಿಕೆ ಗಳೊಂದಿಗೆ ಒಳಾಂಗಣ ಕ್ರೀಡೆಗಾಗಿ ಚದುರಂಗ, ಕೇರಂ ಬೋರ್ಡ್, ಹಾವು ಏಣಿ ಆಟವಾಡಲು ಕ್ರೀಡಾ ಸಾಮಾಗ್ರಿಗಳನ್ನು ಒದಗಿಸಲಾಗಿದೆ. ಬೆಳ್ಳಿಗೆ 9.00 ಗಂಟೆಗೆ ಕಾಫಿ, ಟೀ ಜೊತೆಗೆ ಬಿಸ್ಕೆಟ್ ಮಧ್ಯಾಹ್ನದ ಹೊತ್ತಿಗೆ ಲಘು ಉಪಹಾರ ಮತ್ತು ಸಂಜೆ 4 ಗಂಟೆಗೆ ಕಾಫಿ ಟೀ ವ್ಯವಸ್ಥೆ ಮಾಡಲಾಗಿದೆ.

ಹಿರಿಯರ ಒತ್ತಾಯದ ಮೇರೆಗೆ ಧಾರ್ಮಿಕ ಕ್ಷೇತ್ರಗಳು, ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸ ಕಾರ್ಯಕ್ರಮ ಹಾಗೂ ಯೋಗ ಶಿಕ್ಷಣ, ಭಜನೆ ಕಾರ್ಯಕ್ರಮ, ನೃತ್ಯಗಳ ತರಬೇತಿಗೊಳಿಸಿ ರಂಗಮಂದಿರಗಳಲ್ಲಿ ಪ್ರದರ್ಶನವನ್ನು ಏರ್ಪಡಿಸುತ್ತಾ ಬಂದಿರುತ್ತದೆ.